ದ ಮುಂಬಯಿ ಬರೋಡಾ ಮತ್ತು ಸೆಂಟ್ರೆಲ್ ಇಂಡಿಯ ರೈಲ್ವೆ ಕಂಪೆನಿ, (&) ೧೮೫೫ ರಲ್ಲಿ ಸೇರಲ್ಪಟ್ಟಿತು. ಮುಂಬಯಿ ಮತ್ತು ಬರೋಡ ನಗರಗಳಿಗೆ ಸಂಪರ್ಕ. ೧೮೬೪ ರಲ್ಲಿ ರೈಲ್ವೇ ದಾರಿ ಹಾಕಲ್ಪಟ್ಟಿತು. === ಭಾರತದ ಮೊಟ್ಟಮೊದಲ ಉಪನಗರ ಸೇವಾ ಪದ್ಧತಿ === ವಿರಾರ್ ಮತ್ತು ಕೊಲಾಬಾ ತನಕದ ಉಪನಗರದ ಸಂಚಾರ ವ್ಯವಸ್ಥೆಯಾಯಿತು. ಬ್ಯಾಕ್ ಬೇ ಜಿಲ್ಲೆಯಲ್ಲಿ, ೧೮೬೭ ರಲ್ಲಿ, ಚರ್ಚ್ ಗೇಟ್ ನಲ್ಲಿ ಪ್ರಮುಖ ಕಾರ್ಯಾಲಯವಾಯಿತು. ಮೀಟರ್ ಗೇಜ್ ಗೆ ರೈಲ್ವೆ ಸೇವೆಗಳ ದುರಸ್ತಿಯ ಕಾರ್ಯಾಲಯಗಳಿಗೆ ಅಜ್ಮೇರ್, ಪ್ರಮುಖಕಾರ್ಯಾಲಯವಾಗಿತ್ತು. == ವೆಸ್ಟರ್ನ್ ರೈಲ್ವೆಗೆ ವಿದ್ಯುತ್ ತಂತಿಯ ಕಂಬಗಳ ಅಳವಡಿಕೆ == ದಕ್ಷಿಣ ಮುಂಬಯಿಯ, ಕೊಲಾಬಾದಿಂದ-ಬೋರಿವಲಿಗೆ (೩೭.೮ ಕಿ.ಮೀ) ವಿದ್ಯುತ್ ರೈಲ್ವೆ ದಾರಿ ಅಳವಡಿಸಿದ್ದು, ೫ ಜನವರಿ ೧೯೨೮ ರಲ್ಲಿ. ೧.೫ ಕಿ.ವ್ಯಾಟ್, ಡಿ.ಸಿ.ವಿದ್ಯುತ್ ಪದ್ಧತಿಯನ್ನು ಅಳವಡಿಸಲಾಯಿತು. ಕೊಲಾಬಾ ಹಾಗೂ ಗ್ರಾಂಟ್ ರೋಡ್ ನವರೆಗೆ, ಎರಡು ಟ್ರಾಕ್ ದಾರಿ, ಗ್ರಾಂಟ್ ರೋಡ್ ಬಾಂದ್ರ ವರೆಗೆ ಮತ್ತೆ ೪ ಟ್ರಾಕ್, ೧೯೨೮ ರಲ್ಲಿ ಬಾಂದ್ರ ಹಾಗೂ ಬೋರಿವಲಿವರೆಗೆ, ೨ ಉಪನಗರ ಟ್ರಾಕ್ ಗಳು ಉಗಿಬಂಡಿ ಓಡಾಡಲು ೨ ಟ್ರಾಕ್ == ೧೯೩೩,ರಲ್ಲಿ == ೧೯೩೩ ರಲ್ಲಿ, ಕೊಲಾಬಾ ರೈಲ್ವೆ ಸ್ಟೇಶನ್ ಮತ್ತು ೨ ಎಲೆಕ್ಟ್ರಿಫೈಡ್ ನಿಲ್ದಾಣಗಳನ್ನು ವಜಾಮಾಡಿದರು. ೧೯೩೬, ರಲ್ಲಿ ರೈಲ್ವೆ ವಿದ್ಯುತೀಕರಣದ ಹೆಚ್ಚುವರಿ ವ್ಯವಸ್ಥೆಗಳನ್ನು ಮುಂದುವರೆಸಿದರು. ೨ ಪ್ರಮುಖ ಟ್ರಾಕ್ಸ್ ಗೆ, ಬಾಂದ್ರ ಮತ್ತು ಬೋರಿವಲಿವರೆಗೆ, ಬೋರಿವಲಿ ವಿರಾರ್ ತನಕ, ವಿದ್ಯುತ್ ಸಂಪರ್ಕ ಕೊಡಲಾಯಿತು. ಇದರಿಂದಾಗಿ, ಚರ್ಚ್ ಗೇಟ್-ವಿರಾರ್ ರೈಲು ಸೇವೆ ಸಂಪೂರ್ಣವಾದಂತಾಯಿತು. == ನಂತರದ ಬದಲಾವಣೆಗಳು == ದೇಶಕ್ಕೆ ಸ್ವಾತಂತ್ರ್ಯ ಬಂದಮೇಲೆ,೧೯೪೯,ರಲ್ಲಿ, ಗಾಯಕವಾಡ್ ರವರ ಬರೋಡಾ ರಾಜ್ಯ ರೈಲ್ವೆ,ಮುಂಬಯಿ ಬರೋಡಾ ಅಂಡ್ ಸೆಂಟ್ರೆಲ್ ಇಂಡಿಯ ರೈಲ್ವೆ, ಭಾರತ ಸರಕಾರದ ಆಣತಿಯಂತೆ, ೫ ನವೆಂಬರ್, ೧೯೫೧ ರಲ್ಲಿ, 'ವೆಸ್ಟೆರ್ನ್ ರೈಲ್ವೆ' ಎಂಬ ಹೆಸರಿನಡಿಯಲ್ಲಿ ಕೆಳಗಿನ ರೈಲ್ವೆ ಶಾಖೆಗಳು ಕೆಲಸಮಾಡಲಾರಂಭಿಸಿದವು. ಮುಂಬಯಿ, ಬರೋಡಾ ಅಂಡ್ ಸೆಂಟ್ರೆಲ್ ಇಂಡಿಯ ರೈಲ್ವೆ, ಸೌರಾಷ್ಟ್ರ ರೈಲ್ವೆ, ರಾಜ್ಪುಟಾನ ರೈಲ್ವೆ, ಜೈಪುರ್ ರೈಲ್ವೆ ಅಂಡ್ ಕಚ್ ಸ್ಟೇಟ್ ರೈಲ್ವೆ ಜೊತೆ ವಿಲೀನವಾಯಿತು. == ಗಾಂಧಿ ಚಲನ ಚಿತ್ರ == ೧೯೮೨ ರಲ್ಲಿ ನಿರ್ಮಿತಿಗೊಂಡ ರಿಚರ್ಡ್ ಅಟೆನ್ಬರೋರವರು ನಿಮಿಸಿದ, "ಗಾಂಧಿ" ಚಲನ ಚಿತ್ರದಲ್ಲಿ ಪಶ್ಚಿಮ ರೈಲ್ವೆಯಲ್ಲಿ ಹಲವಾರು ನಗರಗಳಿಗೆ ಗಾಂಧಿಯವರು ಬೇಟಿಕೊಟ್ಟ ಪ್ರಸಂಗಗಳನ್ನು ಬಳಸಲಾಗಿದೆ. ರಾಷ್ಟ್ರದ ನಾಯಕ,ಗಾಂಧೀಜಿಯವರ ಜೀವನ ಚರಿತ್ರೆ, ಬೆನ್ ಕಿಂಸ್ಲಿ ನಟಿಸಿದ, ಅವರು ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಘಟನೆಗಳು. === ಈ ತಾಣಗಳನ್ನೂ ವೀಕ್ಷಿಸಿ === ಸ್ಟೀವನ್ಸ್ ರ ಬಗ್ಗೆ ಇಂಗ್ಲೀಷ್ ವಿಕಿಪೀಡಿಯ ಚಾರ್ಲ್ಸ್ ಒಲಿವೆಂಟ್ ರ ಬಗ್ಗೆ ಇಂಗ್ಲೀಷ್ ವಿಕಿಪೀಡಿಯ ನೋಟ್ : , .. (1988). , : , . 150–1 == ಉಲ್ಲೇಖಗಳು ==